ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ

ತಿರುಪತಿ ತಿರುಮಲ ದೇವಸ್ಥಾನವು ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆಯೆಂದು ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಶಿವ ತಿಳಿಸಿದರು. ಉತ್ತಮವಾದ ಅನ್ನ ಪ್ರಸಾದವನ್ನು ಎಲ್ಲಾ ಕೇಂದ್ರಗಳಲ್ಲಿ ನೀಡುವ ಮೂಲಕ ಯಶಸ್ವಿಯಾಗಿದೆಂದು ಡಾ.ಸಾಂಭಶಿವ ತಿಳಿಸಿದರು. ಚಕ್ರಸ್ನಾನ ಪದ್ಮಾವತಿ ಘಾಟ್ ನ  ಕೃಷ್ಣ ಪುಷ್ಕರಕ್ಕೆ ಬೇಟಿ ನೀಡಿ  ಮಾಧ್ಯಮದೊಂದಿಗೆ ಮಾತನಾಡಿದ ಟಿಟಿಡಿಯ ಡಾ.ಸಾಂಭಶಿವ ಅವರು ಅನ್ನ ಪಸ್ರಾದ ವಿತರಣೆಯಲ್ಲಿ ಭಕ್ತರು ಸ್ವಯಂ ಭಾಗವಹಿಸಿ ಮತ್ತಷ್ಟು ಭಕ್ತಿಯ ಸೇವೆಯನ್ನು ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಒಳಗಾಗಿದ್ದಾರೆಂದು ತಿಳಿಸಿದರು. ಹಿಂದೂ ಧರ್ಮ ಪ್ರಚಾರಕ್ಕಾಗಿ ಆಯೋಜಿಸಿದ್ದ ದಾಸ ಸಾಹಿತ್ಯ, ಭಜನಾ ಮಂಡಳಿ, ಹರಿಕಥಾ ದಾಸ, ನೃತ್ಯ, ಭಕ್ತಿಗೀತೆ ಪುರಾಣ ಪ್ರವಚನ ಹಾಗೂ ಎಸ್.ವಿ. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯವನ್ನು ಕಾರ್ಯಕ್ರವನ್ನು ಭಕ್ತರಿಗಾಗಿ ಏರ್ಪಡಿಸಲಾಗಿತ್ತು. ದರ್ಶನಕ್ಕಾಗಿ ಬಂದಿರುವ ಭಕ್ತರಿಗಾಗಿ ಇ-ಟಿಕೇಟ್ ಕೌಂಟರಗಳ ವ್ಯವಸ್ಥೆ ಮತ್ತು ಅಂಚೆ ವ್ಯವಸ್ಥೆಯನ್ನು ಮಾಡಲಾಗಿತ್ತು.

Related posts

Leave a Comment